ದಿನಾಂಕ 03 ಹಾಗೂ 04 ರಂದು ಶಿವಮೊಗ್ಗದಲ್ಲಿ ನಡೆದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಗುಂಬೆಯ ಅನ್ನಪೂರ್ಣ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಮಿತ್ ಹೆಚ್ ಎಂ ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ತೀರ್ಥಹಳ್ಳಿ ಹರಳಿಮಠದ ಶ್ರೀಮಂಜುನಾಥ್ ಹೆಚ್ ಎನ್ ಹಾಗೂ ಶ್ರೀಮತಿ ಸ್ಮಿತಾ ಎಸ್ ದಂಪತಿಗಳ ಪುತ್ರನಾಗಿದ್ದು ಶಾಲೆಯ ಆಟೋಟಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅತ್ಯುತ್ತಮ ಸಾಧನೆ ಮಾಡಿರುತ್ತಾನೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎ. ವಿ. ಎಂ ವಿದ್ಯಾಸಂಸ್ಥೆಯ ಈ ಹೆಮ್ಮೆಯ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್, ಬೋಧಕ ಹಾಗೂ ಬೋಧಕೇತರ ವರ್ಗ, ಪೋಷಕರು ಹಾಗೂ ಆಗುಂಬೆಯ ಗ್ರಾಮಸ್ಥರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.