ಜ್ಯೋತಿ ಹೆಚ್ ಎಂ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ತೀರ್ಥಹಳ್ಳಿ ಕ್ರೀಡಾಪಟು ಮತ್ತು ಶಿಕ್ಷಕಿ ಜ್ಯೋತಿ H M. ಇವರು ಜುಲೈ 2024 ರಲ್ಲಿ USA ಯಲ್ಲಿ ನೆಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ .

ಜ್ಯೋತಿ H M ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಳೆಹಳ್ಳಿ. 2022 23ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 800 ಮೀಟರ್ ಓಟ, 400 ಮೀಟರ್ ಓಟ, ಉದ್ದ ಜಿಗಿತ, 4*400 ರಿಲೇ, 4*100 ರಿಲೇ ನಲ್ಲಿ ಪ್ರಥಮ ಸ್ಥಾನ ಪಡೆದು, ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್ ಓಟ ಪ್ರಥಮ ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಫೆಬ್ರವರಿ 2024ರಲ್ಲಿ ಚಂಡಿಗಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ. 

ಹಾಗೆ ಧಾರವಾಡದಲ್ಲಿ ನಡೆದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್- 2023 ರಲ್ಲಿ 35 ವರ್ಷ ವಯೋಮಿತಿಯ ವಿಭಾಗದಲ್ಲಿ 400 ಮೀಟರ್ ಓಟ 800 ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಜುಲೈ 2024ರಲ್ಲಿ USA ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ.
2020-21 ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ 800 ಮೀಟರ್ ಓಟ,400 ಮೀಟರ್ ಓಟ ಹಾಗೂ 4*400 ರಿಲೇ ನಲ್ಲಿ ಪ್ರಥಮ ಸ್ಥಾನ ಪಡೆದು ಹರಿಯಾಣದ ಗುರಗಾವ್ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ 400 ಮೀಟರ್ ಓಟದಲ್ಲಿ ಆರನೇ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ಎಂಟನೇ ಸ್ಥಾನ ಪಡೆದು ಬೆಸ್ಟ್ ಆಫ್ ಎಂಟರಲ್ಲಿ ಆಯ್ಕೆ ಆಗಿರುತ್ತಾರೆ.
error: Content is protected !!