ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ, ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ಶಾಲಾ ಶಿಕ್ಷಣ ಮತ್ತು ‌ಸಾಕ್ಷರತಾ ಇಲಾಖೆ

  • ಲಯನ್ಸ್ ಕ್ಲಬ್ ತೀರ್ಥಹಳ್ಳಿ, ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಸಹಕಾರ,
  • ಸಿದ್ದಾಂತ ಪೌಂಡೇಷನ್ ಉಡುಪಿ ಇವರ ವಿಶೇಷ ಪ್ರಯತ್ನ,..
ಈಗಾಗಲೇ ತೀರ್ಥಹಳ್ಳಿ ತಾಲ್ಲೂಕು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯುತ್ತಿರುವುದು ನಮಗೆಲ್ಲಾ, ತಿಳಿದಿರುವುದು ವಿಷಯ, ಇದರ ಮುಂದುವರೆದ ಭಾಗವಾಗಿ, ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಅವರು ಸರ್ವರ ಸಹಕಾರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಾರ್ಯಗಾರ ಮಾಡಿಸಿ, ಯಶಸ್ಸಿಯಾಗಿತ್ತು.
ಇಂದು, ಸಹ ಕಲಿಕೆಯಲ್ಲಿ ಅತ್ಯುತ್ತಮ ಫಲಿತಾಂಶ ಹೊಂದಿರುವ ಮಕ್ಕಳಿಗೆ, ಸಿದ್ದಾಂತ ಫೌಂಡೇಷನ್ ಸಹಕಾರದಲ್ಲಿ, ಮತ್ತೊಂದು ಯಶಸ್ವಿ ಕಾರ್ಯಾಗಾರ, ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆಯಿತು.
ಈ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.. ಮಕ್ಕಳು, ಪೋಷಕರು, ಸಾರ್ವಜನಿಕ ವಲಯದಲ್ಲಿ ಶಿಕ್ಷಣ ಇಲಾಖೆಯ ಈ ಕೆಲಸ ಹೆಚ್ಚು ಅಭಿನಂದನೆಗೆ ಒಳಪಡುತ್ತಿದೆ.
ಈ ಪ್ರೇರಣಾ ಕಾರ್ಯಾಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್‌, ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು, ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶುಭ ಕೋರಿದರು, ಈ ಸಮಯದಲ್ಲಿ, ಪಟ್ಟಣ ಉಪಾಧ್ಯಕ್ಷರಾದ ರಹಮತ್ ವುಲ್ಲಾ ಆಸಾದಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ತನಿಕಲ್ ರಾಜಣ್ಣ, ಮುಖ್ಯಾಧಿಕಾರಿ, ಕುರಿಯೋ ಕೊಸ್, ಕ್ಷೇತ್ರ ಶಿಕ್ಷಣಾಧಿಕಾರಿ, ಗಣೇಶ್ ವೈ, ಸಿದ್ದಾಂತ ಪೌಂಡೇಷನ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ್ ಇ ಬಿ, ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಅಧಿಕಾರಿ ಪ್ರವೀಣ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರಿರಾಜ್ ಜಿ ಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮು ಬಿ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಕೆ ವಿ, ತಾಲ್ಲೂಕು ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಯಾದ ಗಣೇಶ್ ಕೆ ಡಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, 650 ಮಕ್ಕಳು ಹಾಜರಿದ್ದರು.
ಕಾರ್ಯಕ್ರಮದ ಯಶಸ್ವಿ ಗೆ ಸಹಕಾರ ನೀಡಿದ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಹಾಗೂ ಶಿವಮೊಗ್ಗ ಡಿ ಡಿ ಪಿ ಐ, ಪರಮೇಶ್ವರಪ್ಪ ಹಾಗೂ ಶಿಕ್ಷಣಾಧಿಕಾರಿ, ಲೋಕೇಶಪ್ಪ ಶುಭ ಕೋರಿದ್ದಾರೆ.
error: Content is protected !!