ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ..

ಪ್ರಾಚ್ಯಪ್ರಜ್ಞೆ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ.. ತೀರ್ಥಹಳ್ಳಿ ತಾಲ್ಲೂಕಿನ ಚಾಂಪಿಯನ್ಸ್ ಆಗಿ ಶಿವಮೊಗ್ಗ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾದ ಹೊಸೂರು ಗುಡ್ಡೇಕೇರಿ ಶಾಲಾ ಮಕ್ಕಳು..‌

  • ತಾಲ್ಲೂಕು ಹಂತದ ,4 ಸ್ಪರ್ಧೆಯಲ್ಲಿ, 3 ರಲ್ಲಿ ಪ್ರಥಮ ಸ್ಥಾನ ಪಡೆದು ಹೊಸೂರು ಗುಡ್ಡೇಕೇರಿ.

  • ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಮರೆಗು ತಂದ‌ ಮಕ್ಕಳು.

  • ಮಕ್ಕಳ ಸಾಧನೆಗೆ. ಎಸ್ ಡಿ ಎಂ ಸಿ & ಪೋಷಕರ ಬಳಗದ ಅಭಿನಂದನೆಗಳು.

ಇಂದು ಶಿಕ್ಷಣ ಇಲಾಖೆ ಮತ್ತು ಪುರಾತತ್ವ ಇಲಾಖೆ ವತಿಯಿಂದ ನಡೆದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಮೂರು ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡುವುದರ ಮೂಲಕ, ತಾಲೂಕಿನಲ್ಲಿ ನಾವು ಏಕೆ ಟಾಪರ್ಸ್ ಅನ್ನುವುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.

ತಾಲ್ಲೂಕು ಪ್ರಥಮ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳು.. 

ರಸಪ್ರಶ್ನೆ

  • ಅಕ್ಷತಾ ಹೆಚ್ ಯು
  • ಭರತ್ ಬಿರಾದಾರ

ಕನ್ನಡ ಪ್ರಬಂಧ

  • ಸುರಭಿ ಹೆಚ್ ಬಿ

ಕನ್ನಡ ಭಾಷಣ

  • ರಾಹಿಲಾ ಹೆಚ್ ಎ

ರಸಪ್ರಶ್ನೆ, ಪ್ರಬಂಧ, ಭಾಷಣ, ತರಬೇತಿ ನೀಡಿದ ಸಮಾಜ ವಿಜ್ಞಾನ ಶಿಕ್ಷಕರಾದ ವೀರೇಶ್ ಟಿ, ಪ್ರಬಂಧ, ಭಾಷಣ ಸಹಕಾರ ಹಾಗೂ ತಿದ್ದುಪಡಿ ಮಾಡಿದ ಕನ್ನಡ ಭಾಷಾ ಶಿಕ್ಷಕಿ ಸೌಮ್ಯ ಮೇಡಂ ಹಾಗೂ ಆಂಗ್ಲ ಭಾಷಾ ಶಿಕ್ಷಕರಾದ ಶೌಕತ್ ಆಲಿ ಅವರಿಗೆ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಸಾಧನೆ ಮಾಡಿದ ಮಕ್ಕಳಿಗೂ. ಎಸ್ ಡಿ ಎಂ ಸಿ ಹಾಗೂ ಪೋಷಕರು ಊರಿನವರ ಪರವಾಗಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ ಹಾಗು ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಪತ್ರಿಕೆಯ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ..

feeb8f47 d2db 4153 ad31 81bd201fec95
Thirthahalli logo main

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!