ಕಾಳಿಂಗಾ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿ (ಕೆಸಿಆರ್‌ಇ) ಇದು ಪರಿಸರ ಶಿಕ್ಷಣ ಸಂಸ್ಥೆಯಾಗಿದ್ದು. ಇಲ್ಲಿ ವೃತ್ತಿಪರ ಅಥವಾ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ, ಜನರಿಗೆ ವೈಜ್ಞಾನಿಕ ಪರಿಕರಗಳನ್ನು ಕಲಿಯಲು ಕಾರ್ಯಾಗಾರಗಳು ಮತ್ತು ಶಿಬಿರಗಳ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಕಾಳಿಂಗಾ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿ (ಕೆಸಿಆರ್‌ಇ) 2012 ರಿಂದ, ಪ್ರವೇಶ ಬಿಂದುವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಳಿಂಗ ಮನೆ (ಕೆಸಿಆರ್‌ಇ) ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿ, ಗುಡ್ಡೇಕೇರಿ ಚುರ್ಚಿಹಕ್ಲುನಲ್ಲಿದೆ.
ಪಿ ಗೌರಿ ಶಂಕರ್ ಮತ್ತು ಅವರ ಪತ್ನಿ ಶರ್ಮಿಳಾ ಇದರ ಸ್ಥಾಪಕರಾಗಿದ್ದು, ಅವರ ನೇತೃತ್ವದಲ್ಲಿ, ಕೆಸಿಆರ್‌ಇ ಯು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ಹರ್ಪಿಟಾಲಜಿಸ್ಟ್ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಹಾವುಗಳ ರಕ್ಷಣೆ ಮತ್ತು ಸ್ಥಳಾಂತರ, ಹಾವುಗಳ ಕುರಿತು ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳನ್ನು ಉತ್ತೇಜಿಸುವುದು ಮತ್ತು ಮಾನವ ಹಾವಿನ ಸಂಘರ್ಷವನ್ನು ಪರಿಹರಿಸಲು ಒಂದು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸುವುದು ಇಲ್ಲಿನ ಆದ್ಯತೆ.
ಇಲ್ಲಿ ವನ್ಯಜೀವಿ ಉತ್ಸಾಹಿಗಳಿಗೆ, ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರಿಯರಿಗೆ ಊಟ ಮತ್ತು ವಸತಿ ಮೂಲಸೌಕರ್ಯವನ್ನು ಒದಗಿಸುವ ವ್ಯವಸ್ಥೆ ಕೂಡ ಇದೆ. ಕೆಸಿಆರ್‌ಇ ತನ್ನ ಕೇಂದ್ರದಲ್ಲಿ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಾಳಿಂಗ ಮನೆ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಂಬರ್ ಕರೆ ಮಾಡಿ ಮಾಹಿತಿಯನ್ನ ಪಡೆಯಬಹುದು.