ತೀರ್ಥಹಳ್ಳಿ ಗೋಪಾಲ ಆಚಾರ್ಯ

ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನ ರಂಗ ಕಂಡ ಪ್ರಖ್ಯಾತ ಪುಂಡುವೇಷಧಾರಿಗಳಲ್ಲಿ ಒಬ್ಬರು. ಬಡಗುತಿಟ್ಟು ಯಕ್ಷಗಾನ ರಂಗದ ಈ ಕಲಾವಿದ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಮಲೆನಾಡಿನ ತೀರ್ಥಹಳ್ಳಿಯಿಂದ ಬಂದು ಯಕ್ಷಗಾನದ ಆಡು ಅಂಗಳವಾದ ಕುಂದಾಪುರ ತಾಲೂಕಿನ ಸಮೀಪದ ನಾಯಕನಕಟ್ಟೆಯಲ್ಲಿ ನೆಲೆಸಿದರು. ಓದಿದ್ದು ಮೂರನೆಯ ತರಗತಿಯ ವರೆಗೆ. ಆದರೆ ಯಕ್ಷಗಾನದಿಂದ ಗಳಿಸಿಕೊಂಡ ಜ್ಞಾನ ವಿದ್ವಾಂಸರಿಗಿಂತ ಕಡಿಮೆಯೇನಲ್ಲ.

ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಕೃಷ್ಣೋಜಿರಾಯರಿಂದ ಪೂರೈಸಿದರು. ನಂತರ ಮೇಳದ ತಿರುಗಾಟಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ತಾನು ಸ್ವತಃ ಕಂಡು, ಅನುಭವಗಳಿಂದ ಕಲಿತರು. ಆಚಾರ್ಯರ ಈ ತೆರನಾದ ಪ್ರಸಿದ್ಧಿಯು ಅವರಿಗೆ ದಿಢೀರ್ ಉಂಟಾದುದಲ್ಲ. ತನ್ನ ತಮ್ಮ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಆಚಾರ್ಯರು ಬಾಲಗೋಪಾಲ, ಪೀಠೀಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷಗಳನ್ನೂ ಮಾಡಿ ಎರಡನೇ ವೇಷದ ಸ್ಥಾನಕ್ಕೇರಿದರು.

1970ರಿಂದ ತೊಡಗಿ ಒಟ್ಟು 46 ವರ್ಷಗಳ ಕಾಲ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನದಲ್ಲಿ ಬೆಳೆದು ಬಂದು ಪ್ರಸಿದ್ಧಿಯ ಪಥದಲ್ಲಿ ಹೆಜ್ಜೆ ಹಾಕಿದ್ದು ಇತಿಹಾಸ. ಈಚೆಗೆ ನಾಲ್ಕೈದು ವರ್ಷಗಳ ಹಿಂದೆ ಅವರಿಗೆ 60 ವರ್ಷಗಳು ತುಂಬಿತ್ತು. ಆಗ ಅವರ 60ರ ಸಂಭ್ರಮವನ್ನೂ ಆಚರಿಸಲಾಗಿತ್ತು. ಅಂತಹಾ 60ರ ವಯಸ್ಸಿನಲ್ಲಿಯೂ ಪುಂಡುವೇಷಗಳನ್ನು ವಯಸ್ಸಿನ ತೊಡಕುಗಳಿಲ್ಲದೆ ಸುಲಲಿತವಾಗಿ ನಿರ್ವಹಿಸುತ್ತಿದ್ದ ಅವರಿಗೆ ಅರುವತ್ತರ ಅಭಿಮನ್ಯು ಎಂಬ ಹೆಸರು ಸಾರ್ಥಕವಾಗಿ ಒಪ್ಪುತ್ತದೆ.

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!