ಕಡಿದಾಳ್ ಮಂಜಪ್ಪ

ಕಡಿದಾಳ್ ಮಂಜಪ್ಪನವರು 1908 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ಇವರು ತೀರ್ಥಹಳ್ಳಿ, ಶಿವಮೊಗ್ಗ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿಧ್ಯಾಭ್ಯಾಸ ಮಾಡಿ ಬಿ,ಎ.ಪದವಿ ಪಡೆದರು. ಕಡಿದಾಳ್ ಮಂಜಪ್ಪನವರು ಪೂನಾದಲ್ಲಿ ತಮ್ಮ ಕಾನೂನು ಪದವಿ ಪಡೆದರು.

ಕಡಿದಾಳ್ ಮಂಜಪ್ಪನವರು 1927ರಲ್ಲಿಯೇ ಗಾಂಧೀಜಿಯವರ ದರ್ಶನ ಪಡೆದು ಅವರ ತತ್ವಗಳಿಗೆ ಮಾರು ಹೋಗಿ ಅಂದಿನಿಂದಲೇ ಗಾಂದೀವಾದಿಯಾದರು. ಇವರು 1935ರಲ್ಲಿ ಶಿವಮೊಗ್ಗದಲ್ಲಿ ವಕೀಲಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ 1938ರಲ್ಲಿ ವಕೀಲಿ ವೃತ್ತಿಯನ್ನು ತೊರೆದು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಮದೂರಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಪಾಲುಗೊಂಡರು.

ಇವರು 1941ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಮೈಸೂರು ಪ್ರಜಾ ಪ್ರತಿನಿದಿ ಸಬೆಗೆ ಆಯ್ಕೆಗೊಂಡರು. 1952ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿ ಕೆಂಗಲ್ ಹನುಮಂತಯ್ಯ ನವರ ಮಂತ್ರಿ ಮಂಡಲದಲ್ಲಿ ಕಂದಾಯ ಮತ್ತು ಲೋಕೋಪಯೋಗಿ ಸಚಿವರಾದರು. 1956ರರ ಆಗಸ್ಟ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ 75 ದಿನಗಳವರೆಗೆ ರಾಜ್ಯದ ಮುಖ್ಯ ಮಂತ್ರಿಯಾದರು.

error: Content is protected !!