ಶಾಂತವೇರಿ ಗೋಪಾಲಗೌಡರು

ಶಾಂತವೇರಿ ಗೋಪಾಲಗೌಡರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ರೈತಾಪಿ ಕುಟುಂಬದಲ್ಲಿ, 14 ಮಾರ್ಚ್ 1923ರಲ್ಲಿ ಜನಿಸಿದರು. ಅವರ ತಂದೆ ಕೊಲ್ಲೂರಯ್ಯ ಮತ್ತು ತಾಯಿ ಶೇಷಮ್ಮನವರು. ಈ ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಕೊನೆಯವರು ಗೋಪಾಲ ಗೌಡರು. ಅಣ್ಣ ಧರ್ಮಯ್ಯ ಹಾಗೂ ಅಕ್ಕ ಸಿದ್ದಮ್ಮನವರು. ಇವರ ತಂದೆ ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯ ನವರು ಅಂಚೆಪೇದೆಯಾಗಿ ಮಾಡುತಿದ್ದರು.

ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯ ನವರಿಗೆ ನೆರವು ನೀಡುವುದು, ದನ ಮೇಯಿಸುವುದು, ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು.

ನಂತರದ ದಿನಗಳಲ್ಲಿ ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು. ಸ್ವಾತಂತ್ರ್ಯದ ಹೋರಾಟ, ಸೆರೆಮನೆ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ತೆರಳಿದರು. ಹೈಸ್ಕೂಲಿನಲ್ಲಿ ತರುಣ ವಿದ್ಯಾರ್ಥಿಯಾಗಿದ್ದ ಗೋಪಾಲಗೌಡರು ತಮ್ಮ ಪ್ರಭಾವವನ್ನು ತೋರಿಸತೊಡಗಿದರು.

1942 ರ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ (ಟೆಲಿಗ್ರಾಫ್ ತಂತಿ ಕತ್ತರಿಸುವಂತಹ ಚಟುವಟಿಕೆಗಳ ಕಾರಣ) ಹಲವಾರು ತಿಂಗಳುಗಳ ಕಾಲ ಶಿವಮೊಗ್ಗದ ಕಾರಾಗೃಹದಲ್ಲಿ ಬಂದಿಯಾಗಿದ್ದರು. 1951 ರ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಎಂಬ ಹಳ್ಳಿಯಲ್ಲಿ ಭೂರಹಿತ ಹಿಡುವಳಿದಾರರು ತಮ್ಮ ಜಮೀನುದಾರರ ವಿರುದ್ಧ ಹಿಡುವಳಿ ನಿಯಮಗಳ ವಿರುದ್ಧ ಪ್ರತಿಭಟಿಸಿದರು.

ಸ್ವಾತಂತ್ರ್ಯ ಬಂದ ನಂತರ ನಡೆದ ಮೊದಲ ವಿಧಾನ ಸಭೆ ಚುನಾವಣೆಯಲ್ಲಿ ಸಾಗರ-ಹೊಸನಗರದಿಂದ (1952) ಮತ್ತು ನಂತರ ಎರಡು ಬಾರಿ ತೀರ್ಥಹಳ್ಳಿಯಿಂದ (1962 ಮತ್ತು 1967) ಗೋಪಾಲ ಗೌಡರು ಆಯ್ಕೆಯಾದರು. ಯಾವಾಗಲೂ ಸಾಮಾನ್ಯರಿಂದ ಎರವಲು ಪಡೆದ ಸಾಧಾರಣ ಸಂಪನ್ಮೂಲಗಳೊಂದಿಗೆ ನಡೆಸಲ್ಪಡುತ್ತಿದ್ದ ಅವರ ಚುನಾವಣಾ ಪ್ರಚಾರದ ವೈಖರಿಗೆ, ಅವರ ಧೈರ್ಯ ಮತ್ತು ವರ್ಚಸ್ಸಿಗೆ ಅಪಾರ ಸ್ಥಳೀಯ ಮೆಚ್ಚುಗೆ ಇತ್ತು ಮತ್ತು ತಮ್ಮ ಜಾತಿಯ ಮತ್ತು ಇತರ ಸಾಮಾಜಿಕ ಕಟ್ಟಳೆಗಳನ್ನೂ ಮೀರಿ ಜನ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದರು.

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ