ದಾವಣೀಬೈಲು

ದಾವಣೀಬೈಲು ಎಂಬ ಪ್ರದೇಶವು ತೀರ್ಥಹಳ್ಳಿಯ ಬರುವ ಒಂದು ಸುಂದರ ಐತಿಹಾಸಕ ಸ್ಥಳ. ಇದು ತೀರ್ಥಹಳ್ಳಿಯಿಂದ ೧೫.೫ ದೂರದಲ್ಲಿದೆ. ಆರಗದಿಂದ ಕೋಣಂದೂರಿಗೆ ಹೋಗುವ ದಾರಿಯಲ್ಲಿ, ಗುಡ್ದೆಕೊಪ್ಪಗಿಂತ ಮುಂಚೆ ಮರಗಳಲೆ ಬಸ್ ನಿಲ್ದಾಣದಲ್ಲಿ ಎಡಕ್ಕೆ ತಿರುಗಿ ಸುಮಾರು ಎರಡೂವರೆ ಕಿಲೋಮೀಟರ್ ಕಾಡಿನೊಳಗೆ ಹೋದರೆ ದಾವಣೀಬೈಲು ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ೧೨ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪದ ಸೊಗಸಾದ ಗ್ರ್ಯಾನೈಟ್ ಕಲ್ಲಿನ ಕಪಿಲೇಶ್ವರ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಪಟ್ಟ ಬೃಹತ್ ಚೌಕಾಕಾರದ ಪುಷ್ಕರಣಿ ಇದೆ.

12ನೇ ಶತಮಾನದಲ್ಲಿ ಆರಗ ಹದಿನೆಂಟು ಕಂಪಣ ಒಂದು ಬೃಹತ್ ಕೇಂದ್ರ ಬಿಂದು ಆಗಿದ್ದು ಅಂದಿನ ಕಾಲದಲ್ಲಿ ದೊಡ್ಡ ವ್ಯಾಪಾರ ಮತ್ತು ವ್ಯವಹಾರಕ್ಕೆ ಪ್ರಸಿದ್ಧಿಯನ್ನು ಪಡೆದಿತ್ತು. ಘಟ್ಟ ಪ್ರದೇಶ ಹಾಗೂ ಕರಾವಳಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಹತ್ತಿರ ಇದ್ದ ಆರಗ ಎಂಬ ವಿಶಾಲವಾದ ಊರಿನ ಹೊರಭಾಗದಲ್ಲಿ ಇದ್ದ ದೊಡ್ಡ ಬಯಲೇ ಇಂದಿನ ದಾವಣೀಬೈಲು.

ಇಲ್ಲಿ ಶ್ರೀ ಕಪಿಲೇಶ್ವರ ದೇವಸ್ಥಾನವಿದ್ದು, ಈ ದೇವಸ್ಥಾನ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿದ್ದು ಮತ್ತು ಇದರ ವಾಸ್ತುಶಿಲ್ಪ ೧೨ನೇ ಶತಮಾನದ ಹೊಯ್ಸಳ ಶೈಲಿಯಲ್ಲಿ ಇದೆ. ಈ ದೇವಸ್ಥಾನದ ಪೀಠದಲ್ಲಿ ಉಪಪೀಠ, ಜಗತಿ, ಕುಮುದ, ಕಂಠ, ಕಪೋತದ ಅಂಶಗಳು ಒಳಗೊಂಡಿದೆ. ದೇವಸ್ಥಾನ ಮೂರು ಪ್ರಮುಖ ಭಾಗದಲ್ಲಿ ಅಂದರೆ ಗರ್ಭಗೃಹ, ನವರಂಗ ಮತ್ತು ಮುಖ್ಯಮಂಟಪಯಂದು ವಿಂಗಡಿಸಲಾಗಿದೆ.

ಈ ದೇವಸ್ಥಾನದ ಮುಖ್ಯ ಮಂಟಪದ ಹೊರಗಡೆಯ ಬಿತ್ತಿಯ ಮೇಲೆ ಬಗೆ ಬಗೆಯ ಉತ್ತರ ಮತ್ತು ದಕ್ಷಿಣ ಭಾರತದ ಹಲವು ಗೋಪುರದ ವಿನ್ಯಾಸವನ್ನು ಕೆತ್ತಲಾಗಿದೆ. ಒಂದು ಬಿತ್ತಿ ಪಟ್ಟಿಯಲ್ಲಿ, ನಾಯಿ ಮತ್ತು ಹುಲಿಯನ್ನು ಪಳಗಿಸಿ ಅದರ ಕೊರಳಿಗೆ ಪಟ್ಟಿಯನ್ನು ಧರಿಸಿಲಾಗಿದೆ. ಇದೆ ಪಟ್ಟಿಯಲ್ಲಿ ಒಬ್ಬ ಯೋಗಿ ಒಂದು ಚಂಡಿನ ಮೇಲೆ ಹಲಗೆಯನ್ನು ಇಟ್ಟಿ ಅದರ ಮೇಲೆ ಕಾಲನ್ನು ಮಡಿಸಿ, ಕಾಲು ಮತ್ತು ಸೊಂಟಕ್ಕೆ ಪಟ್ಟಿಯನ್ನು ಕಟ್ಟಿಕೊಂಡು ಯೋಗಮುದ್ರೆಯಲ್ಲಿ ಇರುವುದು ಆಕರ್ಷಕವಾಗಿದೆ.

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!