ಮೃಗಾವಧೆ

ಮೃಗಾವಧೆ ಎಂಬುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಇದು ಮೃಗವಧೆ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಜಿಲ್ಲೆಯ ಶಿವಮೊಗ್ಗದಿಂದ 86 ಕಿ.ಮೀ. ತೀರ್ಥಹಳ್ಳಿಯಿಂದ 26 ಕಿ.ಮೀ ದೂರದಲ್ಲಿದೆ.

ಮೃಗಾವಧೆಯು ಸೀಮಿತ ಅರಿವಿನೊಂದಿಗೆ ಇನ್ನೂ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಭಾರತೀಯ ಹಿಂದೂ ಗ್ರಂಥ “ರಾಮಾಯಣ” ದ ಪ್ರಕಾರ, ಶ್ರೀ ರಾಮನನ್ನು ಸೀತೆಯಿಂದ ಬೇರೆಡೆಗೆ ಕೊಂಡೊಯ್ಯುಲು ಚಿನ್ನದ ಜಿಂಕೆಯ ರೂಪದಲ್ಲಿ ಬಂದಿದ್ದ ಮಾರಿಚ ರಾಕ್ಷಸನನ್ನು ಸಂಹರಿಸಿದ ಸ್ಥಳವೇ ಈ ಮೃಗಾವಧೆ.

ರಾಕ್ಷಸನ ಸಂಹಾರದ ನಂತರ ರಾಮ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಇಲ್ಲಿ ಪುರಾತನ ಮತ್ತು ಸುಂದರ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ದೇವಾಲಯವೇ ಇಂದು ಮಲ್ಲಿಕಾರ್ಜುನ ದೇವಸ್ಥಾನವಾಗಿ ಪ್ರಸಿದ್ಧವಾಗಿದೆ . ಮಲ್ಲಿಕಾರ್ಜುನ ಸ್ವಾಮಿಯು ತುಂಗಾ ನದಿಯಲ್ಲಿದ್ದಾನೆ. ನಾಲ್ಕುವರೆ ಅಡಿ ಎತ್ತರದ ಶಿವಲಿಂಗ ಇಲ್ಲಿನ ವಿಶೇಷತೆಯಾಗಿದೆ.

error: Content is protected !!