ಎಸ್. ವಿ. ಪರಮೇಶ್ವರ ಭಟ್ಟ

ಎಸ್. ವಿ. ಪರಮೇಶ್ವರ ಭಟ್ಟ ರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನಲ್ಲಿ ೧೮ ಫೆಬ್ರವರಿ ೧೯೧೪ರಲ್ಲಿ ಜನಿಸಿದರು. ಇವರ ತಂದೆ ಸದಾಶಿವರರಾಯರು ಮತ್ತು ತಾಯಿ ಲಕ್ಷ್ಮಮ್ಮ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದುದು ತೂದೂರು ಎಂಬ ಹಳ್ಳಿಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ತೀರ್ಥಹಳ್ಳಿ. ಕಮಗೋಡು ನರಸಿಂಹ ಶಾಸ್ತ್ರಿಗಳು ಇವರ ಗುರುಗಳು. ಇಂಟರ್ ಮೀಡಿಯೆಟ್ ಕಾಲೇಜು ಓದಿದ್ದು ಬೆಂಗಳೂರು. ನಂತರ ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿ.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಶಿವಮೊಗ್ಗ, ತುಮಕೂರು ಕಾಲೇಜುಗಳಲ್ಲಿ ದುಡಿದು ಮತ್ತೆ ಮೈಸೂರಿಗೆ. ನಂತರ ಮಂಗಳೂರಿಗೆ ವರ್ಗಾವಣೆ. ೧೯೬೯ರಲ್ಲಿ ಮಂಗಳ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕತ್ವ ಹೊಂದಿದರು.

೧೯೪೦ರಲ್ಲಿ ಬೆಳಕು ಕಂಡ ೨೭ ಗೀತೆಗಳ ಸಂಕಲನ ‘ರಾಗಿಣಿ’ ಮೊಟ್ಟಮೊದಲ ಕಾವ್ಯಕೃತಿ. ನಂತರ ಪ್ರಕಟಿಸಿದ್ದು ೧೧ ಕವನಸಂಕಲನಗಳು. ೨ ವಚನ ಕೃತಿಗಳು ; ಗಾದೆ ಮತ್ತು ಒಗಟುಗಳ ಪುಸ್ತಕ-೩ ; ಸೀಳುನೋಟ, ಅಕ್ಕಮಹಾದೇವಿ, ಭಾವಗೀತೆ ಮುಂತಾದ ೭ ವಿಮರ್ಶಾ ಗ್ರಂಥಗಳು. ಹಾಸ್ಯ ಮುಕ್ತಕಗಳ ಮೂಲಕ ಕಾವ್ಯದಲ್ಲಿ ಹಾಸ್ಯದ ಹೊನಲು ಹರಿಸಿದರು. ಸುಮಾರು ೩೦ಕ್ಕೂ ಮಿಕ್ಕು ಕೃತಿಯನ್ನು ಅನುವಾದಿಸಿದ್ದಾರೆ. ಅದರಲ್ಲಿ ಸಂಸ್ಕೃತದಿಂದ ಅನುವಾದಿಸಿದ್ದೇ ಹೆಚ್ಚು. ಕಾಳಿದಾಸನ ಸಮಗ್ರ ಕೃತಿಗಳನ್ನು ‘ಕಾಳಿದಾಸ ಮಹಾಸಂಪುಟ’ದಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಕನ್ನಡ ಮತ್ತು ನಾನು, ಅರವತ್ತರ ಅರಳು ಮುಂತಾದ ೫ ಇತರ ಕೃತಿ ರಚಿಸಿದ್ದಾರೆ.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕ.ಸಾ.ಪ.ದ. ಚಾವುಂಡರಾಯ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗಳು ದೊರೆತಿವೆ.

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!