ಅಂಬುತೀರ್ಥ

ಅಂಬುತೀರ್ಥವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬರುವ ಒಂದು ಪುಣ್ಯ ಕ್ಷೇತ್ರ. ಇದು ತೀರ್ಥಹಳ್ಳಿಯಿಂದ ಸುಮಾರು 18 km ದೂರದಲ್ಲಿ ಇದೆ. ಈ ಕ್ಷೇತ್ರವು ಶರಾವತಿ ನದಿಯ ಉಗಮ ಸ್ಥಾನವಾಗಿದೆ.

ಅಂಬುತೀರ್ಥ ಕ್ಷೇತ್ರವು ಇಲ್ಲಿರುವ ಶಿವ ದೇವಾಲಯದಲ್ಲಿರುವ ಶಿವನ ಪಾದದ ಬಳಿಯಿಂದ ಹುಟ್ಟುವ ಶರಾವತಿ ನದಿ ಅಲ್ಲಿರುವ ಕೊಳ್ಳವೊಂದಕ್ಕೆ ಹರಿದು ನಂತರ ಗುಪ್ತಗಾಮಿನಿಯಾಗಿ ಹರಿದು ಹೊಸನಗರ ಸಾಗರ ಸಿರ್ಸಿ ಗೇರುಸೊಪ್ಪ ಮೂಲಕ ನದಿಯಾಗಿ, ನಂತರ ಹಲವು ಉಪನದಿಗಳಿಂದ ಕೂಡಿಕೊಂಡು ಸುಮಾರು 128 km ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಅಂಬುತೀರ್ಥ ಒಂದು ಇತಿಹಾಸಿಕ ಕ್ಷೇತ್ರವಾಗಿದ್ದು, ತ್ರೇತಾಯುಗದಲ್ಲಿ ರಾಮನು ಅರಣ್ಯ ವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ. ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ, ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ. ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ.

error: Content is protected !!